ಗೋ ಹತ್ಯೆಯನ್ನು ನಿಲ್ಲಿಸದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಹಿಂಜವೇ..!!

Date:

ಗೋ ಹತ್ಯೆಯನ್ನು ನಿಲ್ಲಿಸದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಹಿಂಜವೇ..!!

ಭದ್ರಾವತಿ : ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಕಸಾಯಿ ಖಾನೆಗಳು ಗೋಮಾಂಸ ಹೋಟೆಲ್ ಗಳು ತಲೆಯೆತ್ತಿವೆ. ಈ ಕಾನೂನು ಬಾಹಿರ ಚಟುವಟಿಕೆಯ ವಿರುದ್ಧ ನಿರ್ದಾಕ್ಷಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಹಿಂದು ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.

ಶಿವಮೊಗ್ಗ ಜಿಲ್ಲಾ ಸಮಿತಿಯ ವತಿಯಿಂದ ದಿನಾಂಕ 20/12/2023 ರಂದು ಹಿಂಜಾವೇ ಜಿಲ್ಲಾ ಸಂಚಾಲಕರ ಮುಖಾಂತರ ಆಗ್ರಹ ಪತ್ರವನ್ನು ಜಿಲ್ಲಾಧಿಕಾರಿಗಳಿಗೂ ಮತ್ತು ಎಎಸ್‌ಪಿ ರವರ ಮುಖಾಂತರ ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ನೀಡಲಾಗಿತ್ತು. ಭದ್ರಾವತಿ ಗೋ ಕಸಾಯಿ ಖಾನೆಗಳು ನಡೆಯುತ್ತಿರುವುದಕ್ಕೆ ನೈಜ್ಯ ಸಾಕ್ಷಿಯಂತೆ ಭದ್ರಾವತಿಯ ಭದ್ರಾ ನದಿಯ ದಡದ ಮೇಲೆ ಸುಮಾರು ಎರಡರಿಂದ ಮೂರು ಟನ್ ರಷ್ಟು ಗೋವಿನ ಬುರುಡೆ ಮತ್ತು ಗೋಮಾಂಸದ ಮೂಳೆಗಳು ಶೇಖರಣೆ ಮಾಡಿರುವಂಥದ್ದು ಬೆಳಕಿಗೆ ಬಂದಿದೆ. ನೂರಾರು ಸಂಖ್ಯೆಯಲ್ಲಿ ಗೋವುಗಳ ಹತ್ಯೆ ಆಗಿರುವುದನ್ನು ಹಿಂದು ಜಾಗರಣ ವೇದಿಕೆ ಖಂಡಿಸುತ್ತಿದೆ,

ಗೋವಿನ ಕೊಂಬು, ಗೋವಿನ ಮೂಳೆ,ಸಿಕ್ಕಿರುವ ಆಧಾರ ಇಟ್ಟುಕೊಂಡು ಈ ಕೃತ್ಯದ ಹಿಂದೆ ಇರುವ ಗೋ ಕಸಾಯಿ ಖಾನೆಗಳ ಮೇಲೆ ತಕ್ಷಣ ತಾವು ಗೋ ಹತ್ಯೆ ನಿಷೇಧ ಕಾನೂನು 2020 ರಂತೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಈ ಕೃತ್ಯದ ಹಿಂದಿರುವ ಎಲ್ಲರನ್ನೂ ಬಂಧಿಸಬೇಕು, ಎಂದು ಹಿಂದೂ ಜಾಗರಣ ವೇದಿಕೆ ಭದ್ರಾವತಿ, ಶಿಕಾರಿಪುರ,ಸಾಗರ,ಸೊರಬ,ಹೊಸನಗರ, ತಾಲ್ಲೂಕು ಸಮಿತಿಗಳವತಿಯಿಂದ ಆಗ್ರಹಿಸಿದ್ದಾರೆ.

ಕ್ರಮ ಕೈಗೊಳ್ಳದೆ ಇದ್ದ ಸಂದರ್ಭದಲ್ಲಿ ಜಾಗೃತ ಹಿಂದೂ ಸಮಾಜ ರಸ್ತೆಗೆ ಇಳಿದು ಕಾನೂನು ಬದ್ಧ ಜನಂದೋಲನ ಚಳುವಳಿಯನ್ನು ಆರಂಭಿಸಲು ಸಿದ್ದರಿದ್ದೇವೆ . ಈ ವಿಚಾರವಾಗಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕಾಗಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಗೋ ಹತ್ಯೆ ನಡೆಯುತ್ತಿರುವುದು ಹಿಂದುಗಳ ಭಾವನೆಗೆ ಧಕ್ಕೆ ತರುವಂತ ವಿಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪುಣ್ಯಭೂಮಿಯಲ್ಲಿ ಗೋವಿನ ರಕ್ತ ಹರಿಯುತ್ತಿರುವುದನ್ನು ನಿಲ್ಲಿಸಬೇಕು, ನಿರ್ದಾಕ್ಷಣ್ಯ ಕ್ರಮ ಜರುಗಿಸಬೇಕಾಗಿ, ಹಿಂದೂ ಜಾಗರಣ ವೇದಿಕೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕು ಸಮಿತಿಗಳಿಂದ ಸಮೀಪ ಇರುವ ತಾಲೂಕು ವ್ಯಾಪ್ತಿಯ ಪೊಲೀಸ್ ಠಾಣೆಗಳ ಮುಖಾಂತರ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ತಲುಪಿಸುವಂತೆ ಆಗ್ರಹ ಪತ್ರವನ್ನು ನೀಡಲಾಯಿತು, ಹಿಂದೂ ಜಾಗರಣ ವೇದಿಕೆ ಭದ್ರಾವತಿ, ಶಿಕಾರಿಪುರ, ಸೊರಬ, ಸಾಗರ, ಹೊಸನಗರ, ತಾಲೂಕು ಸಮಿತಿಯ ಕಾರ್ಯಕರ್ತರು ಮತ್ತು ಜಿಲ್ಲಾ ಪ್ರಮುಖ ಕಾರ್ಯಕರ್ತರುಗಳು ಆಗ್ರಹ ಪತ್ರವನ್ನು ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ ನೀಡಲು ಮನವಿ..

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ...

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ವಿಶೇಷ ಪೂಜೆ..

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ...

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ..

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ.. ಹುಡ್ಕೋ ಕಾಲೋನಿ ಶ್ರೀನಿವಾಸ ದೇವಾಲಯದಲ್ಲಿ...