ಅಕ್ರಮ ಗೋಸಾಗಟ ಗೋ ಹತ್ಯೆ ಗೋಕಳ್ಳತನ ವಿರುದ್ಧ ಹಿಂಜವೇ ಯಿಂದ ಜನ ಜಾಗೃತಿ ಮೆರೆವಣಿಗೆ…

Date:

ಅಕ್ರಮ ಗೋಸಾಗಟ ಗೋ ಹತ್ಯೆ ಗೋಕಳ್ಳತನ ವಿರುದ್ಧ ಹಿಂಜವೇ ಯಿಂದ ಜನ ಜಾಗೃತಿ ಮೆರೆವಣಿಗೆ…

ಗೋ ಕಳ್ಳರಿಗೆ ಎಚ್ಚರಿಕೆ ನೀಡಿದ ಹಿಂದೂ ಜಾಗರಣ ವೇದಿಕೆ..

ಭದ್ರಾವತಿ : ಹಿಂದೂ ಜನ ಜಾಗೃತಿ ಮೆರವಣಿಗೆ ಯಶಸ್ವಿ. ನಗರದ ಅಂಡರ್ ಬ್ರಿಡ್ಜ್‌ನ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ಪುತ್ತಳಿಗೆ ಹಿಂಜಾವೆ ಪ್ರಾಂತ ಸಹ ಸಂಚಾಲಕರಾದ ಸತೀಶ್ ದಾವಣಗೆರೆ ಪ್ರಾಂತ ಪ್ರಮುಖರಾದ ಗಣರಾಜ್ ಭಟ್ ಕೆದಿಲಾ ಹಿಂಜಾವೆ ಶಿವಮೊಗ್ಗ ಜಿಲ್ಲಾ ಸಂಯೋಜಕರಾದ ದೇವರಾಜ್ ಅರಳಿಹಳ್ಳಿ ರವರು ಪುಷ್ಪ ಮಾಲಾರ್ಪಣೆ ಮಾಡುವ ಮೂಲಕ ಹಿಂದೂ ಜನಜಾಗೃತಿ ಮೆರವಣಿಗೆಗೆ ಚಾಲನೆ ನೀಡಿದರು

ಮೆರವಣಿಗೆಯಲ್ಲಿ ಪುಷ್ಪಾಲಂಕಾರಗೊಂಡ ಅಖಂಡ ಭಾರತಮಾತೆಯ ಚಿತ್ರಬಿಂಬದೊಂದಿಗೆ ಕೈಯಲ್ಲಿ ಕೇಸರಿ ಧ್ವಜ ಮತ್ತು ಗೋಮಾತೆಯನ್ನು ರಕ್ಷಿಸಿ ಗೋ ಹಂತಕರನ್ನು ಶಿಕ್ಷಿಸಿ ಎಂಬ ಪ್ಲೇ ಕಾರ್ಡ್ಗಳನ್ನು ಕೈಯಲ್ಲಿ ಹಿಡಿದು ಹಿಂದು ಕಾರ್ಯಕರ್ತಯುವಕರು ಹಿರಿಯರು ಪಾಲ್ಗೊಂಡಿದ್ದರು.

ಮೆರವಣಿಗೆಯು ಭದ್ರಾವತಿಯ ಹಳೆ ಸೇತುವೆ ರಸ್ತೆಯಿಂದ ಮಾಧವಚಾ‌ರ್ ಸರ್ಕಲ್ ರಂಗಪ್ಪ ಸರ್ಕಲ್ ನ ಮೂಲಕ ಭಾರತ ಮಾತೆಗೆ ಗೋಮಾತೆಗೆ ರಾಷ್ಟ್ರಭಕ್ತರಿಗೆ ಜೈಕಾರ ಹಾಕುತ್ತಾ ಭದ್ರಾವತಿಯ ತಾಲೂಕು ಕಚೇರಿ ಮುಂದೆ ಹಿಂದೂ ಜನಜಾಗೃತಿ ಸಭೆಯನ್ನು ನಡೆಸಲಾಯಿತು.

ಸಭೆಯನ್ನು ಸತೀಶ್ ದಾವಣಗೆರೆ ಅವರು ಉದ್ಘಾಟಿಸಿದರು. ಪ್ರಾಸ್ತಾವಿಕ ನುಡಿಗಳನ್ನು ದೇವರಾಜ್ ಅರಳಿಹಳ್ಳಿ ಮಾತನಾಡಿದರು. ಸುಮಾರು ಒಂದುವರೆ ಎರಡು ವರ್ಷದಿಂದ ಜಿಲ್ಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಸಂಪೂರ್ಣ ಗೋಹತ್ಯೆಯನ್ನು ನಿಲ್ಲಿಸ ಬೇಕೆಂದು ಕಾನೂನಾತ್ಮಕ ಹೋರಾಟ ಕಾನೂನಾತ್ಮಕ ಚಳುವಳಿಯನ್ನು ನಡೆಸಿಕೊಂಡು ಬಂದಿದ್ದೇವೆ ಬಹುತೇಕ ಶಿರಾಳಕೊಪ್ಪದಲ್ಲಿ 90 ಭಾಗ ಯಶಸ್ಸನ್ನು ಕಂಡಿದೆ ಇನ್ನೂ ಹತ್ತು ಭಾಗ ಉಳಿದಿದೆ 10 ಭಾಗವನ್ನು ಸಮೇತ ಯಶಸ್ವಿಯಾಗಿ ಮುಚ್ಚಿಸುತ್ತೇವೆ ಎಂದರು.

ಅದೇ ರೀತಿ ಭದ್ರಾವತಿಯ ಜನತೆ ಶಿರಾಳಕೊಪ್ಪದ ಹಿಂದುಗಳ ಜನಸಂಖ್ಯೆ ಬರಿ 28% ಜನಸಂಖ್ಯೆ ಇರಬಹುದು ಆ 28% ಹಿಂದುಗಳು ಕಸಾಯಿ ಖಾನೆ ಮುಚ್ಚಿಸುತ್ತಾರೆ, ಎಂದರೆ 70% ಭದ್ರಾವತಿ ಯಲ್ಲಿ ಇರುವಂತಹ ಹಿಂದುಗಳು ನಾವು ಮನಸ್ಸು ಮಾಡಬೇಕು ಭದ್ರಾವತಿಯಲ್ಲಿ ಒಂದು ಹನಿ ಗೋವಿನ ರಕ್ತವು ಹರಿಯಬಾರದು. ತಾಯಿ ಭದ್ರಾ ಹರಿಯುವ ಪುಣ್ಯಭೂಮಿಯಲ್ಲಿ ಗೋವಿನ ರಕ್ತ ಹರಿಯಬಾರದು. ಭದ್ರಾವತಿಯ ನಾಗರೀಕ ಬಂಧುಗಳು ಭದ್ರಾವತಿಯ ರೈತರು ಬದಲಾಗಿದ್ದಾರೆ. ಬಹುತೇಕ ರೈತರು ಭದ್ರಾವತಿಯಲ್ಲಿ ಕಸಾಯಿ ಖಾನೆ ಗಳಿಗೆ ಗೋವುಗಳನ್ನು ನೀಡುತ್ತಿಲ್ಲ. ಶಿವಮೊಗ್ಗದ ಗೋಶಾಲೆಗೆ ನೀಡಲು ಭದ್ರಾವತಿಯ ರೈತರು ಬದಲಾಗಿದ್ದಾರೆ. ಆದರೆ ಪೊಲೀಸರು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಪ್ರತಿದಿನ ಭದ್ರಾವತಿಗೆ ಹೊರಗಿನಿಂದ ಗೋವುಗಳು ಬರುತ್ತಿವೆ. ಒಂದು ಪೊಲೀಸರೇ ನೀವು ನಿಲ್ಲಿಸಿ ಇಲ್ಲವಾದರೆ ಹಿಂದೂ ಜನಸಾಮಾನ್ಯರು ನಿಲ್ಲಿಸುವ ದಿನ ಮುಂದಿದೆ. ಭದ್ರಾವತಿಗೆ ಅಕ್ರಮವಾಗಿ ಗೋವುಗಳು ಬರುವುದು ನಿಂತರೆ ಭದ್ರಾವತಿಯ ಮಧ್ಯಭಾಗದಲ್ಲಿರುವ ಕಸಾಯಿ ಕಾನೆಗಳು ನಿಲ್ಲುತ್ತವೆ. ಭದ್ರಾವತಿಯಲ್ಲಿ ಬಹುತೇಕ ಕಸಾಯಿ ಕಾನೆಗಳು 3-4 ದಿನದಿಂದ ಮುಚ್ಚಿದ್ದಾರೆ ಬಹುತೇಕ ಗೋವಿನ ಮಾಂಸದ ಹೋಟೆಲ್ ಗಳು ಶಾಶ್ವತವಾಗಿ ಮುಚ್ಚುತಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ ನೀಡಲು ಮನವಿ..

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ...

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ವಿಶೇಷ ಪೂಜೆ..

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ...

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ..

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ.. ಹುಡ್ಕೋ ಕಾಲೋನಿ ಶ್ರೀನಿವಾಸ ದೇವಾಲಯದಲ್ಲಿ...