ಸಮುದಾಯ ಭವನವನ್ನು ಸಾರ್ವಜನಿಕರ ಉಪಯೋಗಕ್ಕೆ ಕೊಡಿ ಎಂದು ಸಾರ್ವಜನಿಕರಿಂದ ಪ್ರತಿಭಟನೆ..

Date:

ಸಮುದಾಯ ಭವನವನ್ನು ಸಾರ್ವಜನಿಕರ ಉಪಯೋಗಕ್ಕೆ ಕೊಡಿ ಎಂದು ಸಾರ್ವಜನಿಕರಿಂದ ಪ್ರತಿಭಟನೆ..

ಭದ್ರಾವತಿ : ಫಿಲ್ಟರ್ ಶೆಡ್ ಜಾಗದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಿಂದ ಹಾಗೂ ಚುನಾಯಿತ ಪ್ರತಿನಿಧಿಗಳ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಿ ಅಕ್ರಮ ವ್ಯಸಗಿದ್ದು ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಫಿಲ್ಟರ್ ಶೆಡ್ ಸಾರ್ವಜನಿಕರ ಉಪಯೋಗಕ್ಕೆ ಸಮುದಾಯ ಭವನ ಹಸ್ತಾಂತರಿಸಿ ಎಂದು ಮನವಿ ನೀಡಿದ ನಾಗರಿಕರು.

ಫಿಲ್ಟರ್ ಶೆಡ್ ನಲ್ಲಿ ಸುಮಾರು 200 ಬಡ ಕುಟುಂಬಗಳು 75- 80 ವರ್ಷಗಳಿಂದ ಜೀವನ ಸಾಗಿಸುತ್ತಾ ಬಂದಿರುತ್ತಾರೆ ಈಗಿನ ಫಿಲ್ಟರ್ ಶೆಡ್ ಹಿಂದೆ ಗೋಮಾಳವಾಗಿತ್ತು ಮೈಸೂರು ಮಹಾರಾಜರ ಅನುಗ್ರಹದಿಂದ ಬಡ ನಾಗರಿಕರು ವಾಸಿಸಲು ಅನುವು ಮಾಡಿಕೊಟ್ಟಿದ್ದರು.

ಇಲ್ಲಿನ ನಾಗರಿಕರು ಮದುವೆ ಜಾತ್ರೆ ಹಬ್ಬ ಹರಿದಿನಗಳನ್ನು ಸೇರಿ ಒಂದೆಡೆ ಆಚರಣೆ ಮಾಡಲು ಫಿಲ್ಟರ್ ಶೇಡ್ಡಿನ ಅಂದಿನ ಮುಖಂಡರುಗಳು ಅಂತರಘಟ್ಟಮ್ಮ ದೇವಸ್ಥಾನದ ಮುಂಭಾಗ 30*75 ಅಳೆತೆಯ ಜಾಗವನ್ನು ಖಾಲಿ ಬಿಟ್ಟಿದ್ದರು ಸದರಿ ಜಾಗದಲ್ಲಿ ಕೆಲವು ಖಾಸಗಿ ಪ್ರಭಾವಿ ವ್ಯಕ್ತಿಗಳು ಸಾರ್ವಜನಿಕರಿಂದ ಹಾಗೂ ಚುನಾಯಿತ ಪ್ರತಿನಿಧಿಗಳ ಅನುದಾನ ಮತ್ತು ಸಹಾಯದಿಂದ ಸಮುದಾಯ ಭವನವನ್ನು ನಿರ್ಮಿಸಿ ಟ್ರಸ್ಟ್ ನೋಂದಣಿ ಮಾಡಿಕೊಂಡಿದ್ದು, ಈಗ ಸಮುದಾಯ ಭವನ ಲೋಕಾರ್ಪಣೆಗೆ ಸಿದ್ಧವಾಗಿದ್ದು ಕೆಲವು ಪ್ರಭಾವಿಗಳು ಸಮುದಾಯ ಭವನವನ್ನು ತಮ್ಮ ಸ್ವಂತ ಸಮುದಾಯ ಭವನ ಎಂಬಂತೆ ಬಿಂಬಿಸುತ್ತಿದ್ದಾರೆ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮುದಾಯ ಭವನ ನಿರ್ಮಿಸಿರುವ ಜಾಗಕ್ಕೂ, ಸಮುದಾಯ ಭವನ ನಿರ್ಮಾಣ ಮಾಡಲು ಮುಂದಾಗಿದ್ದ ಖಾಸಗಿ ವ್ಯಕ್ತಿಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ಈ ಜಾಗ ಬಡ ನಾಗರಿಕರಿಗೋಸ್ಕರ ಎಂದು ಅಂದಿನ ಮುಖಂಡರು ಜಾಗ ನಿಗದಿಪಡಿಸಿದದ್ದರು.

ಆದರೆ ಈಗ ಪ್ರಭಾವಿ ವ್ಯಕ್ತಿಗಳು ಅಕ್ರಮವಾಗಿ ಸಮುದಾಯ ಭವನ ನಿರ್ಮಿಸಿರುವುದು ಖಂಡನೀಯ ತಕ್ಷಣ ತಪಿತಸ್ಥರ ವಿರುದ್ಧ ಸೂಕ್ತ ಕಾನೂನುಕ್ರಮ ತೆಗೆದುಕೊಂಡು ಈಗಿರುವ ಟ್ರಸ್ಟನ್ನು ವಜಾ ಮಾಡಿ ಫಿಲ್ಟರ್ ಸೇಡ್ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಸಮುದಾಯ ಭವನವನ್ನು ಫಿಲ್ಟರ್ ಸೆಟ್ ನಾಗರಿಕ ವಿಕಾಸ ರಕ್ಷಣಾ ಸಮಿತಿಗೆ ವಹಿಸಿಕೊಡಬೇಕು ಅಥವಾ ಸರ್ಕಾರ ವಶಪಡಿಸಿಕೊಂಡು ಫಿಲ್ಟರ್ ಸೆಟ್ ನ ನಾಗರೀಕರ ಹಿತ ಕಾಯಬೇಕು. ಇಲ್ಲವಾದಲ್ಲಿ ವಾದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಕಚೇರಿ ಮುಂದೆ ಅನಿರ್ಧಿಷ್ಟ ಸತ್ಯಾಗ್ರಹ ನಡೆಸುತ್ತೇವೆಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ನಂತರ ಉಪಾತಹಶೀಲ್ದಾರ್ ರವರಿಗೆ ಮನವಿ ಪತ್ರ ನೀಡಲಾಯಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ ನೀಡಲು ಮನವಿ..

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ...

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ವಿಶೇಷ ಪೂಜೆ..

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ...

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ..

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ.. ಹುಡ್ಕೋ ಕಾಲೋನಿ ಶ್ರೀನಿವಾಸ ದೇವಾಲಯದಲ್ಲಿ...