ದೇಶದ 12 ಜ್ಯೋತಿರ್‌ ಲಿಂಗ, 8500 ಕಿಲೋಮೀಟರ್ 20 ದಿನ ಬೈಕ್‌ ಮೂಲಕ ಯಾತ್ರೆ ಕೈಗೊಂಡ ಮೈಕ್ರೋಲ್ಯಾಬ್ಸ್‌ ನ ಪ್ರವೀಣ್‌ ಸಿಂಗ್‌

Date:

ದೇಶದ 12 ಜ್ಯೋತಿರ್‌ ಲಿಂಗ, 8500 ಕಿಲೋಮೀಟರ್ 20 ದಿನ ಬೈಕ್‌ ಮೂಲಕ ಯಾತ್ರೆ ಕೈಗೊಂಡ ಮೈಕ್ರೋಲ್ಯಾಬ್ಸ್‌ ನ ಪ್ರವೀಣ್‌ ಸಿಂಗ್‌

ಬೆಂಗಳೂರು : ದೇಶದ ಪ್ರತಿಷ್ಠಿತ ಔಷಧಿ ಕಂಪೆನಿಯಾದ ಮೈಕ್ರೋ ಲ್ಯಾಬ್ಸ್‌ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಉಪಾಧ್ಯಕ್ಷ ಪ್ರವೀಣ್‌ ಸಿಂಗ್‌ ಬೈಕ್ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಭಾರತದಾದ್ಯಂತ ಇರುವ 12 ಜ್ಯೋತಿರ್ಲಿಂಗಗಳನ್ನು ಬೈಕ್‌ ಮೂಲಕ ಸುತ್ತಾಡಿ ಗಮನ ಸೆಳೆದಿದ್ದಾರೆ. ಧಾರ್ಮಿಕ ಪ್ರವಾಸಕ್ಕೆ ಹೊಸ ಆಯಾಮ ನೀಡಿದ್ದಾರೆ.

ಪ್ರವೀಣ್ ಸಿಂಗ್‌ ಅವರಿಗೆ ಬೈಕ್‌ ರೈಡಿಂಗ್‌ ಪ್ರವೃತ್ತಿಯಾಗಿದ್ದು, “ಉದ್ದೇಶದಿಂದ ಬೈಕ್‌ ಚಾಲನೆ – ರೈಡ್‌ ವಿತ್‌ ಪರ್ಪಸ್‌” ಎಂಬುದು ಅವರ ಧ್ಯೇಯವಾಕ್ಯ. ಇದೇ ಸದಾಶಯದೊಂದಿಗೆ ಅವರು ಸಾಂಸ್ಕೃತಿಕ ಮತ್ತು ಧಾರ್ಮಿಕ ಶ್ರೀಮಂತಿಕೆಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

12 ಜ್ಯೋತಿರ್‌ ಲಿಂಗಗಳ ದರ್ಶನವನ್ನು ಪ್ರವೀಣ್‌ ಅವರು 20 ದಿನಗಳಲ್ಲಿ ಪೂರ್ಣಗೊಳೀಸಿದ್ದಾರೆ. ಒಟ್ಟು 8,500 ಕಿಲೋಮೀಟರ್‌ ಗೂ ಅಧಿಕ ದೂರದ ಪಯಣವನ್ನು ಫಲಪ್ರದವಾಗಿ ಪೂರ್ಣಗೊಳಿಸಿದ್ದು. ಇದು ಕೇವಲ ಬೈಕ್‌ ಸವಾರಿಯಲ್ಲ. ನಮ್ಮ ಸಂಸ್ಕೃತಿಯಲ್ಲಿ ಹುದುಗಿರುವ ಆಧ್ಯಾತ್ಮಿಕ ಪರಂಪರೆಯನ್ನು ಬೆಳಗಿಸುವ, ಜ್ಯೋತಿರ್ಲಿಂಗಗಳು ದೈವಿಕ ಶಕ್ತಿಯನ್ನು ಯುವ ಸಮೂಹವನ್ನು ಪ್ರೇರೇಪಿಸುವುದು ನಮ್ಮ ಗುರಿಯಾಗಿದೆ.

ಮೈಕ್ರೋ ಲ್ಯಾಬ್ಸ್‌ ನ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ವಿ.ಆರ್.‌ ರಾಮಕೃಷ್ಣ ಮಾತನಾಡಿ, “ಬೈಕ್‌ ಸವಾರಿ ವಾರಾಂತ್ಯದಲ್ಲಿ ಊಟ, ಉಪಹಾರಕ್ಕಾಗಿ ಅಲ್ಲ, ಜನಪ್ರಿಯ ತಾಣಗಳ ವೀಕ್ಷಣೆಗೂ ಅಲ್ಲ. ಆದರೆ ಪ್ರವೀಣ್‌ ಅವರು ಸ್ಫೂರ್ತಿದಾಯಕವಾಗಿ ಧಾರ್ಮಿಕ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ವೈಯಕ್ತಿಕ ಭಾವನೆಗಳನ್ನು ಸಕಾರಗೊಳಿಸುವ ಜೊತೆಗೆ ಕೆಲಸದ ಬದ್ಧತೆಯನ್ನು ಸಮರ್ಥವಾಗಿ ಸಮತೋಲನವೊಗಳಿಸುವ ಪ್ರವೀಣ್‌ ಅವರಂತಹ ವ್ಯಕ್ತಿಗಳನ್ನು ನಾವು ಪ್ರಶಂಸಿಸುತ್ತೇವೆ ಎಂದಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ ನೀಡಲು ಮನವಿ..

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ...

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ವಿಶೇಷ ಪೂಜೆ..

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ...

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ..

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ.. ಹುಡ್ಕೋ ಕಾಲೋನಿ ಶ್ರೀನಿವಾಸ ದೇವಾಲಯದಲ್ಲಿ...