ಭದ್ರಾವತಿ ಶಾಸಕರ ಕಛೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯಾರಿಂದ 6 ನೆ ಗ್ಯಾರಂಟಿ ವೇತನ ಹೆಚ್ಚಿಸಲು ಆಗ್ರಹಿಸಿ ಪ್ರತಿಭಟನೆ..

Date:

ಭದ್ರಾವತಿ ಶಾಸಕರ ಕಛೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯಾರಿಂದ 6 ನೆ ಗ್ಯಾರಂಟಿ ವೇತನ ಹೆಚ್ಚಿಸಲು ಆಗ್ರಹಿಸಿ ಪ್ರತಿಭಟನೆ..

ಭದ್ರಾವತಿ : ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಭದ್ರಾವತಿ ಶಾಸಕರ ಕಛೇರಿ ಮುಂದೆ 6 ನೆ ಗ್ಯಾರೆಂಟಿ ವೇತನ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡುವಂತೆ ಒತ್ತಾಯಿಸಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಪ್ರತಿಭಟನೆ ನಡೆಸಲಾಯಿತು.

ಚುನಾವಣೆ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಹೇಳಿದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ವೇತನ ಹಾಗೂ ಸಹಾಯಕಿಯರಿಗೆ 10 ಸಾವಿರ ವೇತನ ನೀಡುವುದಾಗಿ ಭರವಸೆ ನೀಡಿದ್ದರು ಆದರೆ ಆ ಭರವಸೆ ಬರವಸೆಯಗಿಯೇ ಉಳಿದಿದೆ ಹಾಗೂ ನಿವೃತ್ತರಿಗೆ 3 ಲಕ್ಷ ಹಿಡಿ ಗಂಟು ಜಾರಿ ಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಸದನದಲ್ಲಿ ಬಜೆಟ್ ಮಂಡನೆ ವೇಳೆ ನಮ್ಮ ವೇತನ ಕ್ಕೆ ಸಂಬಂಧ ಪಟ್ಟಂತೆ ಯಾವುದೆ ನಿರ್ಣಯ ತೆಗೆದುಕೊಂಡಿಲ್ಲ. ನಮ್ಮ ಜೀವನ ನಡುದಾರಿಯಲ್ಲಿ ಬಿದ್ದಂತಾಗಿದೆ. ನಮ್ಮ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ನೀಡುವುದಕ್ಕೂ ಆಗುತ್ತಿಲ್ಲ ಹೊಟ್ಟೆ ಗಿದ್ದರೆ ಬಟ್ಟೆಗಿಲ್ಲ ಬಟ್ಟೆಗಿದ್ರೆ ಹೊಟ್ಟೆಗಿಲ್ಲ ಎಂದು ಸಂಘಟನೆಯಾ ಅಧ್ಯಕ್ಷೆ ವೇದಾವತಿ ಗುಡುಗಿದ್ದಾರೆ.

ಸದನದಲ್ಲಿ ಬಜೆಟ್ ಅನುಮೋದನೆ ಪಡೆಯುವ ಮೊದಲು ಅಂಗನವಾಡಿಯಲ್ಲಿ ದುಡಿಯುತ್ತಿರುವ ಸಾವಿರಾರು ಮಹಿಳಾ ಸಮುದಾಯಕ್ಕೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕೆಂದು ಭದ್ರಾವತಿ ಶಾಸಕರಾದ ಸಂಗಮೇಶ್ ಮುಖಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ಅಧ್ಯಕ್ಷೆ ವೇದಾವತಿ, ಉಪಾಧ್ಯಕ್ಷೆ ಇಂದಿರಾಬಾಯಿ, ಪ್ರಧಾನ ಕಾರ್ಯದರ್ಶಿ ಕೆ ಸಿ ವಿಶಾಲಮ್ಮ ಸೇರಿದಂತೆ ನೂರಾರು ಕಾರ್ಯಕರ್ತೆಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ ನೀಡಲು ಮನವಿ..

ಶಿವಮೊಗ್ಗ ರೈಲು ನಿಲ್ದಾಣದಿಂದ ಹೋಂ ನರ್ಸ್ ಐಶ್ವರ್ಯ ನಾಪತ್ತೆಯಾದ ಯುವತಿ, ಮಾಹಿತಿ...

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ವಿಶೇಷ ಪೂಜೆ..

ಯಶಸ್ವಿ ಒಂದು ವರ್ಷ ಪೂರೈಸಿದ ಸಂಭ್ರಮ- ಶಿವಮೊಗ್ಗ ಜಿಲ್ಲಾ ಯುವ...

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ..

ಲೋಕ ಕಲ್ಯಾಣಕೊಸ್ಕರ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ.. ಹುಡ್ಕೋ ಕಾಲೋನಿ ಶ್ರೀನಿವಾಸ ದೇವಾಲಯದಲ್ಲಿ...